Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

State News

ನಗರದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಯೋಜನಾ ಪೂರ್ವಕವಾಗಿ ಕ್ರಮ: ಪಾಲಿಕೆ ಆಯುಕ್ತ ಜುಬೀನ್ ಮಹೋಪತ್ರ

ನಗರದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಯೋಜನಾ ಪೂರ್ವಕವಾಗಿ ಕ್ರಮ: ಪಾಲಿಕೆ ಆಯುಕ್ತ ಜುಬೀನ್ ಮಹೋಪತ್ರ

ರಾಯಚೂರು: ರಾಜ್ಯದಲ್ಲಿ ಎಲ್ಲಾ ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸವಾಲುಗಳು, ಸಮಸ್ಯೆಗಳಿರುತ್ತವೆ. ರಾಯಚೂರು ನಗರಸಭೆ ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ನಗರದಲ್ಲಿರುವ ಹಲವು ಸಮಸ್ಯೆಗಳು ಸವಾಲುಗಳನ್ನು ಪರಿಹರಿಸಲು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಯೋಜನಾ ಪೂರ್ವಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬೇನ್ ಮೋಹಪತ್ರ ಹೇಳಿದರು.

ಇದನ್ನೂ ಓದಿ: ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಜುಬೇನ್ ಮೋಹಪಾತ್ರ ಅಧಿಕಾರ ಸ್ವೀಕಾರ: ಪಾಲಿಕೆ ಕಚೇರಿ ವೀಕ್ಷಣೆ

ಅವರಿಂದು ನಗರದ ಜಿಲ್ಲಾದಿಕಾರಿ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯವಾಗಿ ಅನೇಕ ಸಮಸ್ಯೆಗಳಿರುವ ಬಗ್ಗೆ ಮಾಹಿತಿಯಿದೆ. ಸಮ್ಯೆಗಳೇ ಇಲ್ಲದಿದ್ದರೇ ಪಾಲಿಕೆಗೆ ಕೆಲಸವೇ ಇರುವುದಿಲ್ಲ ಆದ್ದರಿಂದ ನಗರದಲ್ಲಿರುವ ಬೀದಿ ದೀಪ, ರಸ್ತೆ, ಚರಂಡಿ ಸ್ವಚ್ಛತೆ, ಕುಡಿಯುವ ನೀರು, ಪಾಳಿಕೆ ತೆರಿಗೆ ವಸೂಲಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಕೊರತೆ ಅಥವಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಈಗಾಗಲೇ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ನಗರದಲ್ಲಿ ಕೈಗೊಳ್ಳಬೇಕಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಂತರ ಅವರಿಂದ ಸೂಕ್ತ ಸಲಹೆಗಳನ್ನು ಪಡೆದು ಜನರಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು ನಗರಸಭೆ ಕಚೇರಿಗೆ ಭೇಟಿ ನೀಡಿ, ಪಾಲಿಕೆ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಿ, ರಾಯಚೂರಿಗೆ ಬಹುದೊಡ್ಡ ಇತಿಹಾಸವಿದ್ದು, ರಾಯಚೂರಿನ ಬಗ್ಗೆ ಸಾಕಷ್ಟು ಓದಿಕೊಂಡು ಬಂದಿದ್ದೇವೆ. ಇನ್ನು ಮುಂದೆ ರಾಯಚೂರು ನಗರದಲ್ಲಿ ಸೇವೆ ಸಲ್ಲಿಸಲು ಬಂದಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ.

ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವಾರ್ಡ್ವಾರು ಸಮಸ್ಯೆಗಳ ಪಟ್ಟಿ ಮಾಡಿ, ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಸದಸ್ಯರಾದ ಜಯಣ್ಣ, ಜಿಂದಪ್ಪ, ಇ.ಶಶಿರಾಜ, ನಾಗರಾಜ, ತಿಮ್ಮಪ್ಪ, ಹರಿ ರಾಂಪೂರ್, ಆಸೀಫ್, ವಾಹೀದ್, ವಲಯ ಆಯುಕ್ತ ಮಹೆಬೂಬ್ ಜಿಲಾನಿ ಸೇರಿದಂತೆ ಇತರರಿದ್ದರು.

Megha News