ರಾಯಚೂರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿದ್ದು, ಆದರೆ ಯಾವು ದೇ ಅಭಿವೃದ್ಧಿ ಕೆಲಸ ಮಾಡದೇ, ಅನುದಾನ ಗ್ಯಾ ರಂಟಿಗಳಿಗೆ ಬಳಕೆ ಮಾಡಿದೆ, ಮುಂದಿನ ಐದು ವರ್ಷ ಪೂರ್ಣಗೊಳಿಸುವುದು ಅನು ಮಾನ, ಇದೊಂದು ಅಲ್ಪಾಯುಷಿ ಸರ್ಕಾರ ಎಂದು ಹುಬ್ಬ ಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ರಾಜ್ಯದಲ್ಲಿ ಸರ್ಕಾರಕ್ಕೆ ಅಸ್ತಿತ್ವವಿಲ್ಲ
ದಂತಾಗಿದೆ, ಕಾಂಗ್ರೆಸ್ಸಿಗರು ದಿನ ಕ್ಕೊಂದು ಹೇಳಿಕೆ ನೀಡುತ್ತಿದೆ, ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಈ ಬಗ್ಗೆ ಸಿದ್ದತೆ ಕೈಗೊಳ್ಳ ದೇ ಇರುವುದು ನಿರ್ಲ ಕ್ಷ್ಯ ವಹಿಸಲಾಗಿದೆ ಎಂದರು.
ಬಿಜೆಪಿ ಪಕ್ಷದಿಂದ ಬರಗಾಲ ಅಧ್ಯಯನಕ್ಕಾಗಿ ತಂಡವ ನ್ನು ರಚನೆ ಮಾಡಿ ಕೊಂಡು ತೆರಳಿದ್ದು ಇದೀಗ ಎಚ್ಚೆತ್ತು ಕೊಂಡು ಮಂತ್ರಿಗಳನ್ನು ಬರ ವೀಕ್ಷಣೆಗೆ ಕಳುಹಿಸಲಾಗಿದೆ, ಕಾಂಗ್ರೆಸ್ ಸರ್ಕಾ ರದ ಬರ ವೀಕ್ಷಣೆ ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ನಿಭಾಯಿಸು ವಲ್ಲಿ ಸರ್ಕಾರ ವಿಫಲವಾಗಿದೆ, ವಿದ್ಯುತ್ ಇದ್ದರೂ ರೈತರಿಗೆ ನೀಡುತ್ತಿಲ್ಲ,ಸಣ್ಣ ನೀರಾವರಿ ಸಚಿವರು ಜಿಲ್ಲೆಯವರಾಗಿದ್ದರೂ ಕೆಲಸ ಮಾಡುತ್ತಿಲ್ಲ,
ಕೇಂದ್ರ ಸರ್ಕಾರದ ಕೃಷಿ ಸಮ್ಮಾನ ನಿಧಿ ಹಣ ವನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿದೆ, ಆದರೆ ಎಲ್ಲದಕ್ಕೂ ಬಿಜೆಪಿಯನ್ನೇ ಸೂಚಿಸುವ ಕೆಲಸ ಮಾಡುತ್ತಿದೆ ಕೇಂದ್ರ ಬಿಜೆಪಿ ಸರ್ಕಾರವು ಸಾವಿರಾ ರು ಕೋಟಿ ರೂ. ನೆರವು ರಾಜ್ಯಕ್ಕೆ ನೀಡಿದೆ, ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಮತ್ತು ಮೋದಿಯವರ ಆಡಳಿತದಲ್ಲಿ ನೀಡಿದ ಪರಿಹಾರ ಮೊತ್ತದ ಅಂಕಿ ಅಂಶ ತುಲನೆ ಮಾಡಲಿ ಎಂದು ತಿಳಿಸಿದರು.
Megha News > Politics News > ಕಾಂಗ್ರೆಸ್ ಸರ್ಕಾರಕ್ಕೆ ಅಸ್ತಿತ್ವವಿಲ್ಲ, ಐದು ವರ್ಷ ಪೂರ್ಣಗೊಳಿಸುವುದು ಅನುಮಾನ
ಕಾಂಗ್ರೆಸ್ ಸರ್ಕಾರಕ್ಕೆ ಅಸ್ತಿತ್ವವಿಲ್ಲ, ಐದು ವರ್ಷ ಪೂರ್ಣಗೊಳಿಸುವುದು ಅನುಮಾನ
Tayappa - Raichur09/11/2023
posted on
Leave a reply