Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಬರಗಾಲ ಭೀಕರತೆ: ಪಾಸ್ಟೀಕ್ ತಿನ್ನುತ್ತಿವೆ ಜಾನುವಾರುಗಳು; ದೊರೆಯದ ಮೇವು

ಬರಗಾಲ ಭೀಕರತೆ: ಪಾಸ್ಟೀಕ್ ತಿನ್ನುತ್ತಿವೆ ಜಾನುವಾರುಗಳು; ದೊರೆಯದ ಮೇವು

ರಾಯಚೂರು.ಬರಗಾಲ ತ್ರೀವತೆ ದಿನದಿಂದ ದಿನಕ್ಕೆ ಗಂಬೀರವಾಗುತ್ತಿದ್ದು ಜಿಲ್ಲಾಡಳಿತ ಲೋಕಸಭಾ ಚುನಾವಣಾ ಚಟುವಟಿಕೆಯಲ್ಲಿ ತಲ್ಲೀನವಾಗಿದೆ. ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಜಾನುವಾರುಗಳಿಗೆ ಮೇವಿನ ಕೊರತೆ ಗಂಬೀರವಾಗಿ ಕಾಡತೊಡಗಿದೆ.ನಗರದಲ್ಲಿರುವ ಜಾನುವಾರುಗಳಿಗೆ ಮೇವಿನ ಕೊರತೆಯ ಹಿನ್ನಲೆಯಲ್ಲಿ ನೂರಾರು ಜಾನುವಾರಗಳು ಘನತ್ಯಾಜ್ಯ ವಿಲೇವಾರಿ ಕೇಂದ್ರದಲ್ಲಿ ಪ್ಲಾಸ್ಟಿಕ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ದಯನೀಯ ಸ್ಥಿತಿ ಕಾಣುವಂತಾಗಿದೆ.
ಪಶು ಸಂಗೋಪನಾ ಇಲಾಖೆ ಮೇವಿನ ಕೊರತೆಯಿಲ್ಲ ಎಂದು ಹೇಳುತ್ತಲೇ ಬಂದಿದೆ. ರೈತರು ಜಾನುವಾರಗಳಿಗೆ ನೇರ ರಾಜ್ಯದಿಂದ ಮೇವು ತಂದು ವ್ಯವಸ್ಥೆ ಮಾಡಿಕೊಳ್ಳುತ್ತಲಿದ್ದಾರೆ. ಜಿಲ್ಲಾಡಳಿತ ಮೇವು ಕೇಂದ್ರ ಅಥವಾ ಗೋ ಶಾಲೆಗಳ ವ್ಯವಸ್ಥೆ ಮಾಡಿಲ್ಲ.
ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ೪ ಲಕ್ಷ ೭೩ ಸಾವಿರ ಟನ್ ಮೇವಿನ ಸಂಗ್ರಹವಿದೆ. ಮಾರ್ಚ ತಿಂಗಳಿಂದ ೨೯ ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ ಎಂದು ತಿಳಿಸಿದೆ. ಆದರೆ ಜಾನುವಾರುಗಳಿಗೆ ಮೇವಿನ ಅಭಾವ ಪರಸ್ಥಿತಿ ಗಂಬೀರವಾಗಿರುವದಾಗಿ ರೈತರು ಹೇಳುತ್ತಿದ್ದಾರೆ. ೩೨೬೨ ಜನ ರೈತರಿಗೆ ಮಿನಿ ಕಿಟ್ ವಿತರಿಸುವದಾಗಿ ಪಶು ಸಂಗೋಪನಾ ಇಲಾಖೆ ತಿಳಿಸಿದೆ. ೧೩ ಸಾವಿರ ರೈತರಿಗೆ ಕಿಟ್‌ಗಳನ್ನು ನೀಡುವದಾಗಿ ಹೇಳುತ್ತಿದೆ. ಆದರೆ ರಾಯಚೂರು ನಗರದಲ್ಲಿರುವ ಜಾನುವಾರುಗಳಿಗೆ ಯಾವುದೆ ಕಿಟ್ ತಲುಪಿಲ್ಲ. ಬೀದಿ ಜಾನುವಾರುಗಳ ಮಾಲೀಕರಿದ್ದರೂ ರಕ್ಷಿಸುವ ಕೆಲಸವಾಗುತ್ತಿಲ್ಲ. ಸಮರ್ಪಕ ಮೇವು ದೊರೆಯದೇ ಜಾನುವಾರುಗಳು ಮನೆ ಮನೆಗಳಿಗೆ ಹೋಗುತ್ತಿವೆ. ಇಲ್ಲ ಪ್ಲಾಸ್ಟಿಕ್ ತಿಂದು ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿ ಜಾನುವಾರುಗಳು ಸಿಲುಕಿವೆ. ನೂರಾರು ಸಂಖ್ಯೆಯಲ್ಲಿ ಪ್ಲಾಸ್ಟಿಕ್ ತಿನ್ನುವ ಅಪಾಯದಲ್ಲಿರುವ ಜಾನುವಾರುಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ.

Megha News