ರಾಯಚೂರು.ಒಳ ಮೀಸಲಾತಿ ವರ್ಗೀಕರಣಕ್ಕೆ ಮುಖ್ಯಮಂತ್ರಿಗಳಿಗೆ ಘೇರಾವ್ ಮಾಡುವದಾಗಿ ಪ್ರಕಟಿಸಿದ್ದ ರಾಜ್ಯ ಮುಖಂಡ ಎಸ್.ಮಾರೆಪ್ಪ ಇವರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ ಘಟನೆ ಜರುಗಿದೆ.
ಬೆಳಿಗ್ಗೆ ಡಿವೈಎಸ್‌ಪಿ ಸತ್ಯನಾರಾಯಣ ನೇತೃತ್ವದ ಪೊಲೀಸರು ಹರಿಜನವಾಡದಲ್ಲಿರುವ ಎಸ್.ಮಾರೆಪ್ಪ ಇವರ ಮನೆಗೆ ತೆರಳಿ ಮನವಿ ನೀಡಲು ಆವಕಾಶ ನೀಡಲಾಗುತ್ತದೆ ಹೊರತು ಘೇರಾವ್ ನೀಡಲು ಅವಕಾಶ ನೀಡುವದಿಲ್ಲ. ಮನೆಯಿಂದ ಹೊರಬರದಂತೆ ತಡೆದಿದ್ದಾರೆ. ಈಗಾಗಲೇ ಅನೇಕ ಬಾರಿ ಮನವಿ, ಪ್ರತಿಭಟನೆ ಮಾಡಿದ್ದಾಗಲೂ ಮುಖ್ಯಮಂತ್ರಿಗಳು ಸ್ಪಂದಿಸದೇ ಇರುವಾಗ ಮನವಿ ನೀಡಲು ಬರುವದಿಲ್ಲ ಎಂದು ಎಸ್.ಮಾರೆಪ್ಪ ಹೇಳಿದರು.
ಕೊನೆಗೆ ಪೊಲೀಸರು ಮನೆಯಲ್ಲಿ ಗೃಹ ಬಂಧನದಲ್ಲಿರಿಸಿದರು. ಪ್ರಕರಣದ ಕುರಿತಂತೆ ಎಸ್.ಮಾರೆಪ್ಪ ಖಂಡಿಸಿದ್ದಾರೆ. ಹೋರಾಟ ಭಾಗವಾಗಿಯೇ ಗೃಹಬಂಧನಕ್ಕೆ ಒಳಗಾಗಿದ್ದೇನೆ. ಪೊಲೀಸರು ಅವಕಾಶ ನೀಡದೇ ಇರುವದು ಖಂಡನಾರ್ಹವೆಂದು ತಿಳಿಸಿದ್ದಾರೆ.
ಹೋರಾಟ ಹತ್ತಿಕ್ಕುವ ಕೆಲಸ ಪೊಲೀಸರು ಮಾಡಿದ್ದಾರೆ. ಸಾಥ್ ಮೈಲ್ ಕ್ರಾಸ್ ಬಳಿ ಸಿಎಂಗೆ ಮನವಿ ನೀಡಲು ಸಹ ಪೊಲೀಸರು ಅವಕಾಶ ನೀಡಿಲ್ಲ ಎಂದು ದೂರಿದ್ದಾರೆ.