Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಗೋಕಾಕ್ ಚಳುವಳಿ ಕಾರ್ಯಕ್ರಮ, ನಾಡ ಗೀತೆಗೆ ಅಗೌರವ ತೋರಿದ ಶಾಸಕದ್ವಯರು

ಗೋಕಾಕ್ ಚಳುವಳಿ ಕಾರ್ಯಕ್ರಮ, ನಾಡ ಗೀತೆಗೆ ಅಗೌರವ ತೋರಿದ ಶಾಸಕದ್ವಯರು

ರಾಯಚೂರು : ಕನ್ನಡ ಸಂಸ್ಕೃತಿ ಇಲಾಖೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಗೋಕಾಕ್ ಚಳುವಳಿಯ ಹಿನ್ನೋಟ – ಮುನ್ನೋಟ ಕಾರ್ಯಕ್ರಮವಿಂದು ಕೃಷಿ ವಿವಿ ಆವರಣದಲ್ಲಿ ಜರುಗಿತು.

ವೇದಿಕೆಯ ಕಾರ್ಯಕ್ರಮವು ಸಿಎಂ ಸಿದ್ಧರಾಮಯ್ಯನವರು ಆಗಮಿಸುತ್ತಿದ್ದಂತೆ ಕಾರ್ಯಕ್ರಮವು ಆರಂಭವಾಯಿತು. ತದನಂತರದಲ್ಲಿ ವೇದಿಕೆಯ ವೇಳೆ ನಾಡಗೀತೆಯ ಮೂಲಕ ಕಾರ್ಯಕ್ರಮವು ಆರಂಭವಾಯಿತು. ಈ ವೇಳೆ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರೆ. ವೇದಿಕೆಯ ಮೇಲೆಯೇ ಇರುವ ಮಸ್ಕಿ ವಿಧಾನಸಭಾ ಶಾಸಕರಾದ ಬಸವನಗೌಡ ತುರ್ವಿಹಾಳ್ ಹಾಗೂ ವಿಧಾನಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ ಮಾತ್ರ ನಾಡಗೀತೆ ಆರಂಭವಾದರೂ ಕೂಡ ಏಳಲೇ ಇಲ್ಲ . ಆ ವೇದಿಕೆಯ ಮೇಲೆ ಇದ್ದ ಇನ್ನೊಬ್ಬ ವಿಧಾನಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್ ರು ಕೈ ಹಿಡಿದು ಎಬ್ಬಿಸಿ ನಿಲ್ಲಿಸಿದರು. ಈ ಮೂಲಕ ಗೋಕಾಕ್ ಚಳಳುವಳಿಯ ಕಾರ್ಯಕ್ರಮದಲ್ಲಿಯೇ ನಾಡಗೀತೆಗೆ ಅಗೌರವವನ್ನು ತೋರಿಸಲಾಯಿತು.

Megha News