Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಹರ್ ಫರ್ ತಿರಂಗಾ ಅಭಿಯಾನದಡಿ ಮ್ಯಾರಾಥಾನ್ ಹಾಗೂ ಬೈಕ್ ರ‍್ಯಾಲಿಗೆ ಚಾಲನೆ ರಾಷ್ಟçಧ್ವಜ ಹಾರಿಸುವ ಮೂಲಕ ರಾಷ್ಟçಪ್ರೇಮ ಮೆರೆಯಬೇಕು; ಜಿಲ್ಲಾಧಿಕಾರಿ ನಿತೀಶ್ ಕೆ.

ಹರ್ ಫರ್ ತಿರಂಗಾ ಅಭಿಯಾನದಡಿ ಮ್ಯಾರಾಥಾನ್ ಹಾಗೂ ಬೈಕ್ ರ‍್ಯಾಲಿಗೆ ಚಾಲನೆ ರಾಷ್ಟçಧ್ವಜ ಹಾರಿಸುವ ಮೂಲಕ ರಾಷ್ಟçಪ್ರೇಮ ಮೆರೆಯಬೇಕು; ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರು. ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆ ಪ್ರೇರೇಪಿಸುವುದರ ಸಲುವಾಗಿ ಬೈಕ್ ರ‍್ಯಾಲಿ ಹಾಗೂ ಮ್ಯಾರಾಥಾನ್ ಓಟ ಸ್ಪರ್ಧೆಯನ್ನು ಅಯೋಜಿಸಿದ್ದು, ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟçಧ್ವಜ ಹಾರಿಸುವ ಮೂಲಕ ರಾಷ್ಟçಪ್ರೇಮ ಮೆರೆಯಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ಧಿ ಕೋಶದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಗರಸಭೆ ವತಿಯಿಂದ 78ನೇ ಭಾರತ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಹರ್-ಫರ್ ತಿರಂಗಾ ಅಭಿಯಾನದಡಿ ಮ್ಯಾರಾಥಾನ್ ಓಟ ಸ್ಫರ್ಧೆ ಹಾಗೂ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ಮಾತನಾಡಿದರು.


ಬೈಕ್ ಬೈಕ್ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಾದ ಬಸವೇಶ್ವರ ಸರ್ಕಲ್ ಬಾಬು ಜಗಜೀವನ್ ರಾಮ್ ಸರ್ಕಲ್, ಆರ್.ಟಿ.ಒ ಸರ್ಕಲ್ ಮೂಲಕ ನಗಸಭೆಯನ್ನು ತಲುಪಿತು. ಹಾಗೂ ಮ್ಯಾರಾಥಾನ್ ಓಟ ಸ್ಫರ್ಧೆಯು ಮಹಾತ್ಮ ಗಾಂಧಿ ವೃತ್ತ ಮಾರ್ಗ ತೀನ್ ಕಂದಿಲ್, ನಗರಸಭೆ ಮೂಲಕ ಜಿಲ್ಲಾ ಕ್ರೀಡಾಂಗಣ ಬಂದು ತಲುಪಿ, ಯಶಸ್ವಿಗೊಳಿಸಿಗೊಳಿಸಲಾಯಿತು.


ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಪ್ಪ ಯಲ್ಲಪ್ಪ ಭಜಂತ್ರಿ, ರಾಯಚೂರು ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕರಾದ ಜಗದೀಶ್ ಗಂಗಣ್ಣನವರು, ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ರೋಟರಿ ಕಬ್ಲ್ನ ಅಧ್ಯಕ್ಷ ರವಿಕುಮಾರ ಗಣೆಕಲ್, ನಿರ್ದೇಶಕರಗಳಾದ ಎನ್.ಶಿವಶಂಕರ್ ವಕೀಲರು, ವಿಜಯ ಸಜ್ಜನ್ ಕೇಶವರಾವ್, ಅಮಿತ್ ಪಾಟೀಲ್, ವೆಂಕಟ್ ಸ್ವಾಮಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Megha News