Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಮರ್ಚೆಡ್: ಮಸೀದಿ ಆವರಣದಲ್ಲಿ ಚುನಾವಣಾ ಪ್ರಚಾರ ಸಭೆ ನೀತಿ ಸಂಹಿತೆ ಉಲ್ಲಂಘನೆ

ಮರ್ಚೆಡ್: ಮಸೀದಿ ಆವರಣದಲ್ಲಿ ಚುನಾವಣಾ ಪ್ರಚಾರ ಸಭೆ ನೀತಿ ಸಂಹಿತೆ ಉಲ್ಲಂಘನೆ

ರಾಯಚೂರು. ಮಸೀದಿ ಅವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಪ್ರಚಾರ ಸಭೆ ನಡೆಸಿ ಕರ ಪತ್ರಗಳನ್ನು ಹಂಚಿದ್ದು ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ.

ತಾಲೂಕಿನ ಮನ್ಸಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರ್ಚೆಡ್ ಗ್ರಾಮದ ಮಸೀದಿಯ ಒಳಾಂಗಣದಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಕಾಂಗ್ರೆಸ್ ಮುಖಂಡರು ಗ್ರಾಮಸ್ಥರನ್ನು ಮಸೀದಿಯಲ್ಲಿ ಸೇರಿಸಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಭಾವಚಿತ್ರ ಇರುವ ಕರ ಪತ್ರಗಳನ್ನು ಹಂಚಿ ಮತ ಯಾಚಿಸಿದ್ದಾರೆ.
ನಂತರ ಮತಯಾಚನೆ ಮಾಡಿ, ಸಭೆ ನಡೆಸಿದರು. ಗ್ರಾಮದ ಯುವಕರು ಗ್ರಾಮಸ್ಥರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಅವರಿಗೆ ಮತ ಹಾಕಬೇಕು ಎಂದು ಮತಯಾಚನೆ ಮಾಡಿದ್ದಾರೆ.
ದೇವಸ್ಥಾನ, ಮಂದಿರ, ಮಸೀದಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಚುನಾವಣಾ ಪ್ರಚಾರ ಮತ್ತು ಸಭೆ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದರೂ ಮಸೀದಿಯಲ್ಲಿ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಪ್ರಚಾರ ಸಭೆ ನಡೆಸಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

Megha News