Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Feature Article

ನಾಯಿಯ ಬಾಲವು ಡೊಂಕಾಗಿರುವುದನ್ನು ನೀವು ಹಲವಾರು ಬಾರಿ ನೋಡಿರಬಹುದು. ಆದರೆ ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ನಾಯಿಯ ಬಾಲವು ಡೊಂಕಾಗಿರುವುದನ್ನು ನೀವು ಹಲವಾರು ಬಾರಿ ನೋಡಿರಬಹುದು. ಆದರೆ ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ಅಮೋಘ ನ್ಯೂಸ್ ಡೆಸ್ಕ್:- ನಾಯಿಯ ಬಾಲವು ಡೊಂಕಾಗಿರುವುದನ್ನು ನೀವು ಹಲವಾರು ಬಾರಿ ನೋಡಿರಬಹುದು. ಆದರೆ ಇದಕ್ಕೆ ಕಾರಣವೇನು ಗೊತ್ತಾ? ಪ್ರತಿಯೊಂದು ನಾಯಿಯ ಬಾಲವೂ ಡೊಂಕಾಗಿರುತ್ತದೆ. ಎಷ್ಟೇ ನೆಟ್ಟಗೆ ಮಾಡಲು ಪ್ರಯತ್ನಿಸಿದರೂ ಅದು ಡೊಂಕಾಗಿಯೇ ಇರುತ್ತದೆ. ಇದೇ ಕಾರಣಕ್ಕೆ ಕೆಲವೊಮ್ಮೆ ವ್ಯಕ್ತಿಗಳು ಒರಟಾಗಿ ವರ್ತಿಸಿದಾಗ ನಾಯಿ ಬಾಲ ಡೊಂಕೆ ಎಂಬ ನುಡಿಗಟ್ಟನ್ನು ಬಳಸುತ್ತಾರೆ.

ಪ್ರತಿಯೊಂದು ನಾಯಿಯು ಡೊಂಕು ಬಾಲವನ್ನು ಏಕೆ ಹೊಂದಿದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ನಾಯಿಯ ಬಾಲವು ಡೊಂಕಾಗಿರುತ್ತದೆಯೋ, ಇಲ್ಲವೋ ಎಂಬುದು ಅದರ ತಳಿ ಮತ್ತು ಅದರ ವಂಶವಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಶತಮಾನಗಳಿಂದ ನಾಯಿಯ ವಿಕಾಸದ ಫಲಿತಾಂಶವಾಗಿದೆ. ಆದರೆ ವಿಜ್ಞಾನಿಗಳು ನಾಯಿಗಳಿಗೆ ಡೊಂಕು ಬಾಲ ಬೇಕು ಎಂದು ಹೇಳುತ್ತಾರೆ.
ನಾಯಿಯಲ್ಲಿರುವ ಡೊಂಕು ಬಾಲವು ಅವುಗಳ ವಿಕಾಸದ ಸಮಯದಲ್ಲಿ ಅವುಗಳ ಅಗತ್ಯತೆಗಳ ಕಾರಣದಿಂದಾಗಿ ಬದಲಾಗಬಹುದು. ಶೀತ ಪ್ರದೇಶಗಳಲ್ಲಿ ವಾಸಿಸುವ ನಾಯಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಬಾಲವನ್ನು ಸುತ್ತಿಕೊಳುತ್ತವೆ ಎಂದು ನಂಬಲಾಗಿದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನಾಯಿಗಳು ವಿಶ್ರಾಂತಿ ಪಡೆಯುವಾಗ.. ತಮ್ಮ ಬಾಲವನ್ನು ಮೂಗಿನ ಬಳಿ ಇಟ್ಟುಕೊಳ್ಳುತ್ತವೆ. ಈ ಕಾರಣದಿಂದಾಗಿ ಅವುಗಳು ಬೆಚ್ಚಗಾಗುತ್ತವೆಯಂತೆ. ಆದ್ರೆ ಬಾಲವನ್ನು ತಿರುಗಿಸುವ ಈ ಅಭ್ಯಾಸ ಎಂದಿಗೂ ಬದಲಾಗಲ್ಲ.


ಇದಲ್ಲದೆ, ಮಾನವರು ಶತಮಾನಗಳಿಂದ ನಾಯಿಗಳನ್ನು ಸಾಕುತ್ತಿದ್ದಾರೆ. ಕೆಲವು ನಾಯಿಗಳ ಬಾಲಗಳು ನೇರವಾಗಿದ್ದರೆ, ಕೆಲವೊಂದು ನಾಯಿಗಳದ್ದು ಮಾತ್ರ ಡೊಂಕಾಗಿರುತ್ತದೆ

ಹಾಗಿದ್ರೆ ನಾಯಿಯ ಬಾಲವನ್ನು ಸರಿಪಡಿಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ನಾಯಿಯ ಬಾಲವನ್ನು ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ನೇರಗೊಳಿಸಬಹುದು. ಆದರೆ ನಂತರ ಅದು ಮತ್ತೆ ಡೊಂಕಾಗುವುದಿಲ್ಲ. ಯಾವಾಗಲೂ ನೇರವಾಗಿಯೇ ಇರುತ್ತದೆ. ಆದರೆ ನಾಯಿಯ ಬಾಲವನ್ನು ಈ ರೀತಿ ನೇರಗೊಳಿಸುವುದು ನಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗಿದೆ.
ನಾಯಿಯ ಬಾಲವನ್ನು ನೇರಗೊಳಿಸುವಾಗ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಇಂತಹ ಅಸಹಜ ಕೃತ್ಯ ನಡೆಸುವುದು ಸರಿಯೇ ಎಂಬುದು ನೈತಿಕ ಪ್ರಶ್ನೆಯಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ, ಡಾಕ್ಟರ್​ ನಾಯಿಯ ಮೂಳೆಗಳನ್ನು ಮುರಿದು ಅವುಗಳನ್ನು ಮತ್ತೆ ಜೋಡಿಸುತ್ತಾನೆ, ಇದು ನಾಯಿಗೆ ಸಾಕಷ್ಟು ನೋವನ್ನು ಉಂಟುಮಾಡುತ್ತದೆ. ಇದರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಈ ಮೂಲಕ ನಾಯಿ ಬಾಲವನ್ನು ನೇರವಾಗಿ ಮಾಡಲಾಗುತ್ತದೆ.


ಬಾಲ ನೆಟ್ಟಗೆ ಇರುವ ಹಲವು ಬಗೆಯ ನಾಯಿಗಳಿವೆ. ಬಸೆಂಜಿ ಮತ್ತು ಫರೋ ಹೌಂಡ್ ಜಾತಿಯು ಸೇರಿದೆ. ನೇರವಾದ ಬಾಲವನ್ನು ಹೊಂದಿರುವ ಕೆಲವು ಮಿಶ್ರ ತಳಿ ನಾಯಿಗಳೂ ಇವೆ. ಅಂತಹ ನಾಯಿಗಳಲ್ಲಿ.. ನೇರವಾದ ಬಾಲವು ಸಹಜ. ಇದು ಯಾವುದೇ ಅಸ್ವಸ್ಥತೆಯ ಲಕ್ಷಣವಲ್ಲ.
ಜಗತ್ತಿನಲ್ಲಿ ಬಾಲವಿಲ್ಲದ ನಾಯಿಗಳಲ್ಲಿ ಹಲವು ವಿಧಗಳಿವೆ. ಈ ತಳಿಗಳಲ್ಲಿ ಫ್ರೆಂಚ್ ಬುಲ್ಡಾಗ್, ಬೋಸ್ಟನ್ ಟೆರಿಯರ್, ವೆಲ್ಶ್ ಕೊರ್ಗಿ ಪ್ರಮುಖವಾಗಿವೆ. ಇನ್ನಈ ಜಾತಿಯ ನಾಯಿಗಳಲ್ಲಿ ಕೆಲ ಮಾಲೀಕರು ಬಾಲವನ್ನು ಕತ್ತರಿಸುತ್ತಾರೆ. ಸಾಕು ನಾಯಿಗಳ ಬಾಲವನ್ನು ಕಡಿಯುವುದು ಪಶ್ಚಿಮದಲ್ಲಿ ಸಾಮಾನ್ಯವಾಗಿದೆ.