ರಾಯಚೂರು. ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಪತ್ನಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಸಿಂಗನೋಡಿ ತಾಂಡದಲ್ಲಿ ನಡೆದಿದೆ.
ಮೃತ ಪತಿ ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಹಾಗೂ ಹಾಲಿ ಗ್ರಾಮ ಪಂಚಾಯತಿ ಸದಸ್ಯ ಟಿ.ಎ.ರಾಜು ನಾಯ್ಕ್ ಎಂದು ತಿಳಿದು ಬಂದಿದೆ. ರಾತ್ರಿ ಮಲಗುವಾಗ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದಾರೆ ಎಂದು ಮೃತನ ಸೋದರ ಆರೋಪಿಸಿದ್ದಾರೆ.
ಸಿಂಗನೋಡಿ ತಾಂಡಾದಲ್ಲಿ ಗ್ರಾಮದ ದೇವಸ್ಥಾನ ಗೋಪುರ ನಿರ್ಮಾಣ ಮಾಡಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯು ಪ್ರತಿದಿನಾ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಳು, ಜೊತೆಗೆ ಪ್ರತೀ ದಿನ ಪತಿ ಜೊತೆಗೆ ಜಗಳ ಮಾಡುತ್ತಿದ್ದಳು, ಪತಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಳು, ಮಾನಸಿಕವಾಗಿ ನೊಂದಿದ್ದ ರಾಜು ನಾಯ್ಕ್ ತುಂಬಾ ಕೊಡಿತಕ್ಕೆ ದಾಸನಾಗಿದ್ದ ಕಳೆದ ರಾತ್ರಿ ಕುಡಿದು ಮನೆಗೆ ಬಂದಿದ್ದು, ಪತ್ನಿ
ರಾತ್ರಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದಾರೆ.
ಪತ್ನಿಯ ಜೊತೆಗೆ ಮೂರು, ನಾಲ್ಕು ಜನ ಕೊಲೆ ಯಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಕ್ತಿ ಮತ್ತು ಇದೇ ತಾಂಡದ ಇಬ್ಬರೂ ವ್ಯಕ್ತಿಗಳು ಹಾಗೂ ಬೇರೆ ತಾಂಡದ ಇಬ್ಬರು ವ್ಯಕ್ತಿಗಳು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ.
ಎಂದು ದೂರು ಸಲ್ಲಿಸಿದ್ದಾರೆ.
ಈ ಕುರಿತು ಯಾಪಲದಿನ್ನಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.