ಮುಡಾ ನಿವೇಶನ ಹಗರಣದಲ್ಲಿ ಹಾಲಿ ಸಂಸದ
ರಾಯಚೂರು, ಫೆ.24 –ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನಹಂಚಿಕೆಯಲ್ಲಿ ಅಕ್ರಮವಾಗಿರುವ ಕುರಿತು ಲೋಕಾಯುಕ್ತ ತನಿಖೆಯಲ್ಲಿ ಮುಖ್ಯಮಂತ್ರಿ ಹಾಗೂ ಕುಟುಂಬ ವರ್ಗದ ವಿರುದ್ದ ಕೇಳಿಬಂದಿದ್ದ ಆರೋಪ ಮುಕ್ತಗೊಳಿಸಿ ವರದಿ ನೀಡಿದೆ. ಈ ಮಧ್ಯೆ 2005 ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸದ್ಯದ ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರ ಸೇರಿ ಸಂಬAಧಿಸಿ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿರುವದನ್ನು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿಗಳ ಭಾವ ಮೈದುನ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಇವರ ಹೆಸರಿನಲ್ಲಿದ್ದ ಜಮೀನಿಗೆ ಭೇಟಿ ನೀಡದೇ ಜಿಲ್ಲಾಧಿಕಾರಿಯಾಗಿದ್ದ ಜಿ.ಕುಮಾರನಾಯಕ, ತಹಸೀಲ್ದಾರ, ಭೂ ಮಾಪಕರ ಕರ್ತವ್ಯಲೋಪ ಎಸಗಿದರನ್ನು ಲೋಕಾಯುಕ್ತ ವರದಿಯಲ್ಲಿ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ಜಿ.ಕುಮಾರನಾಯಕರನ್ನು ಲೋಕಾಯುಕ್ತರು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗಿತ್ತು. ಪ್ರಕರಣದಲ್ಲಿ ತಾವೇ ಲೋಪವಾಗಿಲ್ಲ ಎಂದೂ ಸಹ ಸಂಸದ ಜಿ.ಕುಮಾರನಾಯಕ ಹೇಳಿದ್ದರು. ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿರುವ 3 ಎಕರೆ 16 ಗುಂಟೆ ಜಮೀನನಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ದೇವನೂರು ಮೂರನೇ ಹಂತದ ಬಡಾವಣೆಗಾಗಿ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗಿತ್ತು. ಜಮೀನಿಗೆ ಭೇಟಿ ನೀಡದೇ ನಕ್ಷೆಯನ್ನು ತಯಾರಿಸಿ ಅನುಮೋದನೆ ನೀಡಿದ್ದರು ಎಂಬದು ಆರೋಪ ತನಿಖೆಯಲ್ಲಿ ಬಹಿರಂಗವಾಗಿದೆ.
ಬಿ.ಎ.ಮಲ್ಲಿಕಾರ್ಜುನ ಸ್ವಾಮಿಯವರ ಜಮೀನನಲ್ಲಿ ರಸ್ತೆ, ಉದ್ಯಾವನ, ಕಟ್ಟಡಗಳಿಲ್ಲ ಎಂಬ ವರದಿಯನ್ನು ತಹಸೀಲ್ದಾರರು, ಭೂ ಮಾಪಕರು ವರದಿಯನ್ನು ನೀಡಿದ್ದರು. ಲೋಕಾಯುಕ್ತ ತನಿಖೆ ನಡೆಸಿದಾಗ 2005 ಜಿಲ್ಲಾಧಿಕಾರಿಯಾಗಿದ್ದ ಜಿ.ಕುಮಾರನಾಯಕ, ಅಂದಿನ ತಹಸೀಲ್ದಾರ ಮಾಳಿಗೆ ಶಂಕರ, ಕಂದಾಯ ನಿರೀಕ್ಷಕ ಸಿದ್ದಪ್ಪಾಜಿ, ಭೂ ಮಾಪಕ ಶಂಕರಪ್ಪ ಎಂಬುವವರ ಕರ್ತವ್ಯ ಲೋಪ ಎಸಗಿರುವ ಕುರಿತು ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖಿಸಿರುವದು ಚರ್ಚೆಗೆ ಗ್ರಾಸವಾಗಿದೆ.
ಮುಡಾ ಹಗರಣ ಬಹಿರಂಗವಾದಾಗಿನಿAದ ಯಾವುದೇ ಲೋಪ ಆಗಿಲ್ಲ ಎಂದು ಸಮರ್ಥಿಸಿಕೊಂಡ ಬಂದ ಕಾಂಗ್ರೆಸ್ ನಾಯಕರು ಲೋಕಾಯಕ್ತರು ನೀಡಿದ ತನಿಖಾ ವರದಿಯಲ್ಲಿ ಮುಖ್ಯಮಂತ್ರಿ ಸಿಎಂರನ್ನು ಆರೋಪ ಮುಕ್ತಗೊಳಿಸಿರುವದು ಮತ್ತಷ್ಟು ಸಮರ್ಥನೆಗೆ ಸಾಧನೆಯಾಗಿತ್ತು. ಆದರೀಗ ರಾಯಚೂರು ಸಂಸದರ ವಿರುದ್ದ ತನಿಖಾ ವರದಿಯಲ್ಲಿ ಉಲ್ಲೇಖವಾಗಿರುವದು ಬೆಳಕಿಗೆ ಬಂದಿದೆ. ಮೈಸೂಗೂರು ನಗರಾಭಿವೃದ್ದಿ ಪ್ರಾಧಿಕಾರ ನಿವೇಶನ ಅಕ್ರಮ ಆರೋಪ ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ದೂರುದಾರ ಸ್ನೇಹಿಕೃಷ್ಣ ಇವರು ಸಹ ಅಕ್ರಮದ ದಾಖಲೆಗಳನ್ನು ಈ ಹಿಂದೆಯೇ ಬಹಿರಂಗಗೊಳಿಸಿ ಲೋಕಾಯುಕ್ತರಿಗೆ ದೂರಿನ ಮೇರೆಗೆ ಸಂಸದ ಜಿ.ಕುಮಾರನಾಯಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೀಗ ವರದಿಯಲ್ಲಿಕರ್ತವ್ಯಲೋಪ ಆರೋಪ ತನಿಖೆಯಲ್ಲಿಯೂ ಬಹಿರಂಗವಾದAತಾಗಿದೆ.
ಲೋಕಾಯುಕ್ತ ವರದಿ ಆಧಾರಿಸಿ ಮುಂದೆ ಯಾವ ಕ್ರಮವಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.
Megha News > Politics News > ಮುಡಾ ನಿವೇಶನ ಹಂಚಿಕೆ ಪ್ರಕರಣ:ಜಿ.ಕುಮಾರನಾಯಕ ಸೇರಿ ನಾಲ್ಕು ಜನ ಅಧಿಕಾರಿಗಳ ಕರ್ತವ್ಯ ಲೋಪ- ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖ
ಮುಡಾ ನಿವೇಶನ ಹಂಚಿಕೆ ಪ್ರಕರಣ:ಜಿ.ಕುಮಾರನಾಯಕ ಸೇರಿ ನಾಲ್ಕು ಜನ ಅಧಿಕಾರಿಗಳ ಕರ್ತವ್ಯ ಲೋಪ- ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖ
Tayappa - Raichur25/02/2025
posted on

Leave a reply