Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

National News

ಮಂತ್ರಾಲಯ ರಾಯರ ದರ್ಶನ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಹೆತ್ತವರು

ಮಂತ್ರಾಲಯ ರಾಯರ ದರ್ಶನ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಹೆತ್ತವರು

ರಾಯಚೂರು: ಬ್ರಿಟನ್‌ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು ಭಾರತ ಬೇಟಿ ನೀಡಿದ್ದು,ಈ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಶ್ರೀ ರಾಘ ವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡರು.

ಬ್ರಿಟನ್‌ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು, ಜಿ20 ಶೃಂಗಸಭೆ ಪ್ರಯುಕ್ತ ರಿಷಿ ಸುನಕ್ ಕುಟುಂಬ ಸಮೇತವು ಭಾರತಕ್ಕೆ ಭೇಟಿ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು, ರಿಷಿ ಸುನಕ್ ಅವರ ತಂದೆ ಯಶವೀರ್ ಸುನಕ್ ಹಾಗೂ ತಾಯಿ ಉಷಾ ಸುನಕ್ ಅವರನ್ನು ಮಂತ್ರಾಲಯ ರಾಯರ ಮಠಕ್ಕೆ ಕರೆದುಕೊಂಡು ಬಂದರು.
ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದರ್ಶನ ಪಡೆದುಕೊಂಡರು, ಈ ವೇಳೆ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬು ಧೇಂದ್ರ ತೀರ್ಥರು ದಂಪತಿಯನ್ನು ಆಶೀರ್ವದಿಸಿದರು.
ಬ್ರಿಟನ್‌ ಪ್ರಧಾನಿಯಾಗಿರುವ ರಿಷಿ ಸುನಕ್ ಅವರಿಗೆ ಶ್ರೀಗಳು ರಾಯರ ಪ್ರಸಾದ, ವಸ್ತ್ರ ಹಾಗೂ ಮಂತ್ರಾಕ್ಷತೆಯನ್ನು ಕಳುಹಿಸಿದರು.

Megha News