ಅಮೋಘ ನ್ಯೂಸ್ ಡೆಸ್ಕ್: ನಿಮ್ಮ ಸ್ಮಾರ್ಟ್ಫೋನ್ ಇದ್ದಕ್ಕಿದ್ದಂತೆಯೇ ಸೌಂಡ್ ಮಾಡುತ್ತಿದ್ಯಾ?. ಯಾವುದೋ ಒಂದು ಅಲರ್ಟ್ ಮೆಸೇಜ್ ಬಂದಿದೆಯಾ?. ಹಾಗಂತ ಮೊಬೈಲ್ ಹ್ಯಾಕ್ ಆಗಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಇದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕಳುಹಿಸಿದ ತುರ್ತು ಎಚ್ಚರಿಕೆಯ ಸಂದೇಶವಾಗಿದೆ. ಇದನ್ನು ಕೇಂದ್ರದ ದೂರ ಸಂಪರ್ಕ ಇಲಾಖೆ ಕರ್ನಾಟಕದಲ್ಲಿ ಟೆಸ್ಟ್ ನಡೆಸುತ್ತಿದೆ.
ನಿಮ್ಮ ಸ್ಮಾರ್ಟ್ಫೋನ್ ಇದ್ದಕ್ಕಿದ್ದಂತೆಯೇ ಸೌಂಡ್ ಮಾಡುತ್ತಿದ್ಯಾ?. ಯಾವುದೋ ಒಂದು ಅಲರ್ಟ್ ಮೆಸೇಜ್ ಬಂದಿದೆಯಾ?. ಹಾಗಂತ ಮೊಬೈಲ್ ಹ್ಯಾಕ್ ಆಗಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಇದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕಳುಹಿಸಿದ ತುರ್ತು ಎಚ್ಚರಿಕೆಯ ಸಂದೇಶವಾಗಿದೆ. ಇದನ್ನು ಕೇಂದ್ರದ ದೂರ ಸಂಪರ್ಕ ಇಲಾಖೆ ಕರ್ನಾಟಕದಲ್ಲಿ ಟೆಸ್ಟ್ ನಡೆಸುತ್ತಿದೆ.
ಅಂದಹಾಗೆಯೇ, ಇದು ಮಾದರಿ ಪರೀಕ್ಷಾ ಸಂದೇಶವಾಗಿದೆ. ಪ್ರಳಯ, ಪ್ರಕೃತಿ ವಿಕೋಪ ಇಂತಹ ತುರ್ತು ಸಂದರ್ಭದಲ್ಲಿ ಬರುವ ಎಚ್ಚರಿಕೆಯ ಸಂದೇಶ ಇದಾಗಿದೆ. ಭಾರತದ ಪ್ರತಿಯೊಬ್ಬ ನಾಗರೀಕನ ಮೊಬೈಲ್ಗೆ ಈ ಸಂದೇಶ ತಲುಪುತ್ತದೆ. ಇದನ್ನ ಪ್ಯಾನ್ ಇಂಡಿಯಾದಲ್ಲಿ ಅಲರ್ಟ್ ಎಂಬ ಹೆಸರಿನಡಿ ಕ್ಯಾಂಪೇನ್ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ನಡೆದ ಮೊದಲ ಟೆಸ್ಟ್ ಇದಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 11:45ಕ್ಕೆ ಕರ್ನಾಟದಲ್ಲಿ ತುರ್ತು ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ರಾಜ್ಯದ ಜನರಿಗೆ ಈ ಸಂದೇಶ ಬಂದಿದೆ. ಬಹುತೇಕರು ಈ ಮೊಬೈಲ್ ಸಂದೇಶವನ್ನು ಸ್ವೀಕರಿಸಿದ್ದಾರೆ.