Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Sports News

ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ ಬದಲಾವಣೆ ಸಾಧ್ಯ.? ಸೂಚನೆ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ ಬದಲಾವಣೆ ಸಾಧ್ಯ.? ಸೂಚನೆ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಅಮೋಘ ಸ್ಪೋರ್ಟ್ಸ್: ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನ ನಂತರ ತಂಡದ ಪ್ರದರ್ಶನದ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಎರಡನೇ ಟೆಸ್ಟ್​ಗೆ ತಂಡದಲ್ಲಾಗುವ ಬದಲಾವಣೆಯ ಬಗ್ಗೆಯೂ ಮಾತನಾಡಿದ್ದಾರೆ.

ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗೆಲುವಿನ ಆರಂಭ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಮೂರನೇ ದಿನ ಇನ್ನಿಂಗ್ಸ್ ಮತ್ತು 141 ರನ್​ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ವಿಂಡೀಸ್ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 150 ರನ್ ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 421 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಹೀಗಾಗಿ 271 ರನ್ಗಳ ಬೃಹತ್ ಮುನ್ನಡೆ ಸಾಧಿಸಿದ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ವಿಂಡೀಸ್ ತಂಡವನ್ನು ಕೇವಲ 130 ರನ್ಗಳಿಗೆ ಆಲೌಟ್ ಮಾಡುವುದರೊಂದಿಗೆ ಸುಲಭವಾಗಿ ಮೊದಲ ಟೆಸ್ಟ್ ಗೆದ್ದುಕೊಂಡಿತ್ತು. ಈ ಗೆಲುವಿನ ನಂತರ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಎರಡನೇ ಟೆಸ್ಟ್​ಗೆ ತಂಡದಲ್ಲಾಗುವ ಬದಲಾವಣೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಆತಿಥೇಯರ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ನಮ್ಮ ತಂಡದ ಬೌಲಿಂಗ್ ವಿಭಾಗ ಮಾಡಿದ ಕೆಲಸ ತುಂಬಾ ಅಚ್ಚುಕಟ್ಟಾಗಿತ್ತು. ಹೀಗಾಗಿ ನಾವು ಆತಿಥೇಯರನ್ನು ಅಲ್ಪ ರನ್​ಗಳಿಗೆ ಕಟ್ಟುಹಾಕಲು ಸಾಧ್ಯವಾಯಿತು ಎಂದಿದ್ದಾರೆ. ಹಾಗೆಯೇ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡಿದ ಹಿಟ್​ಮ್ಯಾನ್, ಈ ಪಿಚ್​ನಲ್ಲಿ ಬ್ಯಾಟಿಂಗ್ ಕಠಿಣವಾಗುತ್ತದೆ ಎಂದು ನಮಗೆ ತಿಳಿದಿತ್ತು, ಈ ಪಿಚ್​ನಲ್ಲಿ ಸುಲಭವಾಗು ರನ್ ಗಳಿಸುವುದು ಸುಲಭವಲ್ಲ. ಹೀಗಾಗಿ ನಾವು ತಾಳ್ಮೆಯ ಬ್ಯಾಟಿಂಗ್ ಮಾಡಬೇಕೆಂದು ನಮಗೆ ತಿಳಿದಿತ್ತು. ಆದ್ದರಿಂದ ನಾವು ಸುದೀರ್ಘ ಸಮಯ ಬ್ಯಾಟಿಂಗ್ ಮಾಡಿ 400 ರನ್ ಕಲೆ ಹಾಕಿ ನಂತರ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡೆವು ಎಂದು ಶರ್ಮಾ ಪಂದ್ಯದ ನಂತರ ಹೇಳಿದರು.

ಇನ್ನು ಎರಡನೇ ಟೆಸ್ಟ್​ಗೆ ತಂಡದಲ್ಲಾಗಬಹುದಾದ ಬದಲಾವಣೆಯ ಬಗ್ಗೆ ಮಾತನಾಡಿದ ರೋಹಿತ್, ತಂಡದಲ್ಲಿ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡದ ಕೆಲವು ಆಟಗಾರರಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಲು ತಂಡವು ನೋಡುತ್ತಿದೆ ಎಂದು ಹೇಳಿದರು. ‘ಸರಣಿಯನ್ನು ಉತ್ತಮವಾಗಿ ಪ್ರಾರಂಭಿಸುವುದು ಮುಖ್ಯ, ಈಗ ಎರಡನೇನೇ ಟೆಸ್ಟ್ನಲ್ಲೂ ಇದೇ ವೇಗವನ್ನು ಮುಂದುವರೆಸಬೇಕು. ಒಂದೆರಡು ಹೊಸ ಹುಡುಗರು ಮತ್ತು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿರುವ ಅನುಭವ ಹೊಂದಿರದ ಆಟಗಾರರು ತಂಡದಲ್ಲಿ ಇದ್ದಾರೆ. ಆದ್ದರಿಂದ ಅವರನ್ನು ಈಗ ಮೈದಾನಕ್ಕೆ ಕರೆತರಬೇಕು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಶರ್ಮಾ ನೀಡಿರುವ ಹೇಳಿಕೆಯ ಪ್ರಕಾರ ಎರಡನೇ ಟೆಸ್ಟ್​ಗೆ ತಂಡದಲ್ಲಿ ಬದಲಾವಣೆ ಕಂಡು ಬಂದರೆ, ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಎರಡನೇ ಟೆಸ್ಟ್​ನಲ್ಲಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿಬೆ. ಗಾಯಕ್ವಾಡ್ ಮತ್ತು ಮುಖೇಶ್ ಇನ್ನೂ ಟೆಸ್ಟ್ ಗೆ ಪದಾರ್ಪಣೆ ಮಾಡಿಲ್ಲ. ಹಾಗೆಯೇ ಸೈನಿ ಕೂಡದೀರ್ಘಕಾಲದಿಂದ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಗಾಯಕ್ವಾಡ್ ಭಾರತದ ಪರ ಕೇವಲ ಒಂದು ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಇನ್ನೂ ಸುದೀರ್ಘವಾದ ಸ್ವರೂಪದಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿಲ್ಲ. ಏತನ್ಮಧ್ಯೆ, ಕುಮಾರ್ ಭಾರತದ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಸೈನಿ ಟೆಸ್ಟ್ ಅನುಭವಿ ಕೂಡ ಅಲ್ಲ. ಹೀಗಾಗಿ ಈ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಸುಳಿವನ್ನು ರೋಹಿತ್ ನೀಡಿದ್ದಾರೆ. ಏತನ್ಮಧ್ಯೆ, ಎರಡನೇ ಟೆಸ್ಟ್ ಪಂದ್ಯ ಜುಲೈ 20 ರಿಂದ ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಆರಂಭವಾಗಲಿದೆ.

Megha News