Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National News

ನಿಮಗೆ ಬಾಡಿಗೆಗೆ ಪತ್ನಿಯರು ಬೇಕೆ ಈ ಗ್ರಾಮಕ್ಕೆ ಬೇಟಿ ನೀಡಿ

ನಿಮಗೆ ಬಾಡಿಗೆಗೆ ಪತ್ನಿಯರು ಬೇಕೆ ಈ ಗ್ರಾಮಕ್ಕೆ ಬೇಟಿ ನೀಡಿ

ಮಧ್ಯಪ್ರದೇಶ: ಶಿವಪುರಿ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಬಾಡಿಗೆಗೆ ಪತ್ನಿಯರು ಸಿಗುವ ಈ ವಿಚಿತ್ರ ಪದ್ಧತಿ ಇದೆ. ಧಾಡಿಚಾ ಪ್ರಾಥ ಎಂದು ಕರೆಯಲ್ಪಡುವ ಈ ವ್ಯವಸ್ಥೆಯಲ್ಲಿ ಹೆಂಡತಿಯರನ್ನು ಒಂದು ತಿಂಗಳಿಂದ ಒಂದು ವರ್ಷದ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ.ಹಳ್ಳಿಯ ಶ್ರೀಮಂತ ವ್ಯಕ್ತಿಗಳು ವಧುವನ್ನು ಹುಡುಕಲು ವಿಫಲರಾದಾಗ ಇಂತಹ ಆಚರಣೆಗಳನ್ನು ಮಾಡಲಾಗುತ್ತದೆ ಇದಕ್ಕಾಗಿ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಸಹ ಸಿದ್ಧಪಡಿಸಲಾಗುತ್ತದೆ. ಈ ಮಾರುಕಟ್ಟೆಯಲ್ಲಿಯೇ ಮಹಿಳೆಯರನ್ನು ಬಾಡಿಗೆಗೆ ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

ವಹಿವಾಟು ಪೂರ್ಣಗೊಂಡ ನಂತರ, ಖರೀದಿದಾರ ಮತ್ತು ಮಹಿಳೆಯ ನಡುವೆ ಒಂದು ಒಪ್ಪಂದವು ರೂಪುಗೊಳ್ಳುತ್ತದೆ. 10ರಿಂದ 100 ರೂ. ಸ್ಟಾಂಪ್ ಪೇಪರ್​ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಸ್ಟಾಂಪ್​ ಪೇಪರ್ ನೀಡಿ ಖರೀದಿಸಿದ ಮಹಿಳೆಯರನ್ನು ಮರುಮಾರಾಟ ಮಾಡಲು ಈ ವ್ಯವಸ್ಥೆಯು ಅವಕಾಶ ನೀಡುತ್ತದೆ. ಒಪ್ಪಂದದ ಅವಧಿಯ ಕೊನೆಯಲ್ಲಿ ಮಹಿಳೆಯರ ಮಾಲೀಕತ್ವವನ್ನು ಹೆಚ್ಚಿನ ಮೊತ್ತಕ್ಕೆ ವರ್ಗಾಯಿಸಬಹುದು ಮತ್ತು ಒಪ್ಪಂದವನ್ನು ನವೀಕರಿಸಬಹುದು.

ಮಹಿಳೆ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಒಪ್ಪಂದದಿಂದ ಹಿಂದೆ ಸರಿಯಬಹುದು. ಇದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅಲ್ಲದೆ, ಮಹಿಳೆ ತನ್ನ ಮಾಜಿ ಪತಿಗೆ ಪೂರ್ವನಿರ್ಧರಿತ ಮೊತ್ತವನ್ನು ಹಿಂದಿರುಗಿಸಬೇಕು. ಮಹಿಳೆ ಇನ್ನೊಬ್ಬ ಪುರುಷನಿಂದ ಹೆಚ್ಚು ಹಣವನ್ನು ಸ್ವೀಕರಿಸುವುದನ್ನು ಸಹ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಪುರುಷನು, ಮಹಿಳೆಯೊಂದಿಗೆ ಒಪ್ಪಂದವನ್ನು ಮುಂದುವರಿಸಲು ಬಯಸಿದರೆ, ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.

ಇಂತಹ ವಿಚಿತ್ರ ಹಾಗೂ ಕಾನೂನು ಬಾಹಿರ ಆಚರಣೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ದೂರುದಾರರು ಇಲ್ಲದ ಕಾರಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ.

Megha News