ನವದೆಹಲಿ: 2024ರ ಬಜೆಟ್ ಅಧಿವೇಶನವು 2024 ರ ಜನವರಿ 31ರ ಇಂದು ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು “ನಾರಿ ಶಕ್ತಿಯ ಹಬ್ಬ” ವನ್ನು ಶ್ಲಾಘಿಸಿದರು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾತನಾಡಿದರು.
ಈ ಹೊಸ ಸಂಸತ್ ಕಟ್ಟಡದಲ್ಲಿ ಕರೆಯಲಾದ ಮೊದಲ ಅಧಿವೇಶನದ ಕೊನೆಯಲ್ಲಿ, ಸಂಸತ್ತು ಒಂದು ಆಕರ್ಷಕ ನಿರ್ಧಾರವನ್ನು ತೆಗೆದುಕೊಂಡಿತು – ನಾರಿ ಶಕ್ತಿ ವಂದನ್ ಅಧಿನಿಯಮ್. ಅದರ ನಂತರ, ಜನವರಿ 26 ರಂದು ದೇಶವು ನಾರಿ ಶಕ್ತಿಯ ಸಾಮರ್ಥ್ಯ, ಅದರ ಶೌರ್ಯ, ಅದರ ಸಂಕಲ್ಪದ ಶಕ್ತಿಯನ್ನು ಹೇಗೆ ಅನುಭವಿಸಿತು ಎಂಬುದನ್ನು ನಾವು ನೋಡಿದ್ದೇವೆ ಅಂತ ತಿಳಿಸಿದರು.
ಇನ್ನೂ ಇಂದು, ಬಜೆಟ್ ಅಧಿವೇಶನ ಪ್ರಾರಂಭವಾದಾಗ, ಮುರ್ಮು ಅವರ ಮಾರ್ಗದರ್ಶನ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸುವಾಗ – ಒಂದು ರೀತಿಯಲ್ಲಿ ಇದು ನಾರಿ ಶಕ್ತಿಯ ಹಬ್ಬವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.