ಅಮೋಘ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಅಸಹ್ಯವೆನ್ನುವ ವಸ್ತುಗಳನ್ನು ಮಾರಾಟ ಮಾಡಲು ಧೈರ್ಯಬೇಕು. ಸಾಮಾಜಿಕ ಜಾಲತಾಣ, ರಿಯಾಲಿಟಿ ಶೋ ಅಥವಾ ಸಿನಿಮಾಗಳಲ್ಲಿ ಪ್ರಸಿದ್ಧಿ ಪಡೆದ ವ್ಯಕ್ತಿಗಳು ಯಾವ ವಸ್ತು ಮಾರಾಟ ಮಾಡಿದ್ರೂ ಅಭಿಮಾನಿಗಳು ಅದನ್ನು ಖರೀದಿ ಮಾಡ್ತಾರೆ.
ಮಹಿಳೆಯೊಬ್ಬಳು ತಾನು ಬಳಸಿದ ಹಳೆ ಸಾಕ್ಸ್ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದು, ಈ ಹಿಂದೆ ಇದು ದೊಡ್ಡ ಸುದ್ದಿಯಾಗಿತ್ತು. ಈಗ ಇನ್ನೋರ್ವ ಯುವತಿ ಚರ್ಚೆಯಲ್ಲಿದ್ದಾಳೆ. ಆಕೆ ಮಾರಾಟ ಮಾಡುವ ವಸ್ತು ಕೇಳಿದ್ರೆ ನೀವು ಅಚ್ಚರಿಗೊಳ್ಳುವದಂತು ಗ್ಯಾರಂಟಿ
ಅಮೆರಿಕದ ರಿಯಾಲಿಟಿ ಶೋನಲ್ಲಿ ಸ್ಟೆಫನಿ ಮ್ಯಾಟೊ ಎಂಬ ಯುವತಿ ಹೋಗಿದ್ದಳು. ಅಲ್ಲಿ ಜನರಿಗೆ ಪರಿಚಯವಾಗಿ ಆಕೆ ಪ್ರಸಿದ್ಧಿ ಅಲ್ಲಿಂದ ಹೆಚ್ಚಾಯ್ತು. ಸಾಮಾಜಿಕ ಜಾಲತಾಣ ಪ್ರಭಾವಿ ಹಾಗೂ ಉದ್ಯಮಿ ಸ್ಟೆಫನಿ 2021ರಲ್ಲಿ ಹೊಸ ಉದ್ಯಮ ಶುರು ಮಾಡಿದ್ಲು. ಅದೇನೆಂದರೆ ತನ್ನ ಗ್ಯಾಸ (Gas) ನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡೋದು. ಚಿಕ್ಕ ಗ್ಲಾಸಿನ ಜಾರಿನಲ್ಲಿ ಅದನ್ನು ತುಂಬಿ ಆಕೆ ಮಾರಿದಳು.
ಆಕೆ ಒಳ್ಳೆಯ ಗ್ಯಾಸ್ ಗಾಗಿ ಸ್ಟೆಫಿನ್ ಮ್ಯಾಟೋ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಬೀನ್ಸ್, ಪ್ರೋಟೀನ್, ಬೇಯಿಸಿದ ಮೊಟ್ಟೆ ಪ್ರೋಟೀನ್ ಶೇಕ್ ಮತ್ತು ಮೊಸರನ್ನು ಬೆಳಗಿನ ಉಪಾಹಾರದಲ್ಲಿ ತಿನ್ನುತ್ತಿದ್ದಳು.
ಯಾವಾಗ ಗ್ಯಾಸ್ ಹೊರ ಬರಲು ಶುರುವಾ ಗುತ್ತೋ ಆಗ ಅದನ್ನು ಬಾಟಲಿಯಲ್ಲಿ ತುಂಬು ತ್ತಿದ್ದಳಂತೆ. ಮೊದಲೇ ಬಾಟಲಿಗೆ ಕೆಲ ಹೂ, ಎಲೆಗಳನ್ನು ಹಾಕಿರುವ ಕಾರಣ ಗ್ಯಾಸ್ ವಾಸನೆ ಬರ್ತಿರಲಿಲ್ಲವಂತೆ. ಸ್ಟೆಫಿನ್ ಒಂದು ಸಣ್ಣ ಜಾರ್ ಗ್ಯಾಸನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂಬುದು ಅಚ್ಚರಿ ಪಡುವಂತದ್ದು.
ಆದ್ರೆ ಸ್ಟೆಫಿನ್ ಈ ಬ್ಯುಸಿನೆಸ್ ತುಂಬಾ ದಿನ ನಡೆಯಲಿಲ್ಲ. ಆಕೆ ಗ್ಯಾಸ್ ಸಲುವಾಗಿ ಆಹಾರವನ್ನು ಹೆಚ್ಚು ಸೇವನೆ ಮಾಡಿದ ಪರಿಣಾಮ ಆಕೆಯ ಹೃದಯದ ಆರೋಗ್ಯ ಹಾಳುಮಾಡಿತ್ತು. ಸ್ಟೆಫಿನ್ ಹೃದಯಾಘಾತಕ್ಕೆ ಒಳಗಾಗಿದ್ದಳು.
ಇದಾದ್ಮೇಲೆ ಗ್ಯಾಸ್ ಮಾರಾಟ ಬಿಟ್ಟಿದ್ದ ಸ್ಟೆಫಿನ್, ಬೆವರಿನ ಮಾರಾಟ ಶುರು ಮಾಡಿದ್ದಳು. ಆಕೆ ತನ್ನ ಎದೆಯ ಮೇಲಿನ ಬೆವರನ್ನು ಜಾರ್ ನಲ್ಲಿ ತುಂಬಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಅನ್‌ಫಿಲ್ಟರ್ಡ್ ಹೆಸರಿನ ವೆಬ್ಸೈಟ್ ಕೂಡ ತೆರೆದಿದ್ದಾಳೆ.