ಅಮೋಘ ನ್ಯೂಸ್ ಡೆಸ್ಕ್ : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸಿಹಿಯಾದ ಕ್ಷಣ. ಜೀವಮಾನದವರೆಗೂ ಸ್ಮರಣೀಯವಾಗಿ ಉಳಿಯುವಂತೆ ಮಾಡಲು ವಧು-ವರ ಇಬ್ಬರು ಸಾಕಷ್ಟಿ ಪ್ಲ್ಯಾನ್ಗಳನ್ನು ಮಾಡಿಕೊಳ್ಳುತ್ತಾರೆ. ಪ್ರೀ ವೆಡ್ಡಿಂಗ್ ಶೂಟ್ನಿಂದ ಹಿಡಿದು ಮದುವೆ ಸ್ಥಳ, ಉಡುಗೆ ಸೇರಿದಂತೆ ಎಲ್ಲವೂ ಶ್ರೀಮಂತಿಕೆಯಿಂದ ಕೂಡಿರಬೇಕೆಂದು ಬಯಸುತ್ತಾರೆ.
ಇಂದಿನ ಮದುವೆ ಸಂಭ್ರಮ ಹಿಂದಿನ ರೀತಿಯಲ್ಲಿ. ಇಂದು ಕೋಟಿ ಕೋಟಿ ರೂಪಾಯಿಯನ್ನೂ ಕೂಡ ಮದುವೆಗಾಗಿ ನೀರಿನಂತೆ ಖರ್ಚು ಮಾಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅನಂತ್ ಅಂಬಾನಿ ಮದುವೆ.
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತನ್ನು ಕೇಳಿರಬಹುದು. ಎರಡೂ ಕೂಡ ಸಾಮಾನ್ಯ ಜನರಿಗೆ ತುಂಬಾ ಕಷ್ಟ. ಲಕ್ಷ ಲಕ್ಷ ಹಣವನ್ನು ಖರ್ಚು ಮಾಡುವವರ ನಡುವೆ ಕೇವಲ ಒಂದು ರೂಪಾಯಿಯಲ್ಲಿ ಮದುವೆ ಆಗಬಹುದು ಎಂದರೆ ನೀವು ನಂಬುತ್ತೀರಾ? ಕೇವಲ 1 ರೂಪಾಯಿಯಲ್ಲಿ ಹೇಗೆ ಸಾಧ್ಯ? ಚಾನ್ಸೇ ಇಲ್ಲ ಎಂದು ನೀವು ಹೇಳಬಹುದು. ಆದರೆ, ಇದು ಸತ್ಯ. ಕೇವಲ ಒಂದು ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳಬಹುದು. ಆದರೆ, ಒಂದು ಕಡೀಷನ್ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ತೆಲಂಗಾಣದ ನಾಗಮಲ್ಲ ಅನಿಲ್ಕುಮಾರ್ ಮತ್ತು ಅರುಣಾ ಇಬ್ಬರು ಅಮ್ಮ ಫೌಂಡೇಶನ್ ನಿರ್ವಾಹಕರು. ಇತ್ತೀಚೆಗೆ ರೂಪಾಯಿ ಫೌಂಡೇಶನ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವ ವಿಕಲಚೇತನರಿಗೆ ಮಾತ್ರ ಕೇವಲ ಒಂದು ರೂಪಾಯಿಯಲ್ಲಿ ಮದುವೆ ಮಾಡಿಕೊಡುತ್ತಾರೆ. ವಿಕಲಚೇತನರ ಜೀವನದಲ್ಲಿ ಬೆಳಕು ತರಲೆಂದು ಈ ವಿಶೇಷ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ವಿಕಲಚೇತನ ದಂಪತಿಗೆ 1 ರೂಪಾಯಿಗೆ ನೋಂದಣಿ ಮಾಡಿಸಿದರೆ ಉಚಿತವಾಗಿ ವಿವಾಹ ಮಾಡಿಕೊಡುವುದಾಗಿ ಹೇಳುತ್ತಾರೆ. ರೂಪಾಯಿ ಫೌಂಡೇಶನ್‌ನ ಈ ನಿರ್ಧಾರ ಅಂಗವಿಕಲರಿಗೆ ವರದಾನವಾಗಲಿದೆ.
ಕಳೆದ 15 ವರ್ಷಗಳಿಂದ ಅಮ್ಮ ಫೌಂಡೇಶನ್ ನೂರಕ್ಕೂ ಹೆಚ್ಚು ಅನಾಥ ಮತ್ತು ವಿಕಲಚೇತನ ದಂಪತಿಗೆ ಮದುವೆ ಮಾಡಿಕೊಟ್ಟಿದೆ. ಈಗ ಕೇವಲ ಒಂದು ರೂಪಾಯಿ ವೆಚ್ಚದಲ್ಲಿ ರೂಪಾಯಿ ಫೌಂಡೇಶನ್‌ನೊಂದಿಗೆ ಮದುವೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತೆಲಂಗಾಣದ ಸಂಗಾರೆಡ್ಡಿ ಮೂಲದ ಪ್ರವಿಲಿಕಾ ಎಂಬುವರು ಇದೇ ಫೌಂಡೇಶನ್ ನೆರವಿನಿಂದ ನಿನ್ನೆಯಷ್ಟೇ ಸೈದಾಬಾದ್‌ನ ಮೆಡ್ಚಲ್‌ನ ರಮೇಶ್ ಎಂಬುವವರನ್ನು ವಿವಾಹವಾದರು.