ರಾಯಚೂರು: 2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಆಟಗಾರ ಪಟ್ಟಿ ರಿಲೀಸ್ ಆಗಿದ್ದು, ರಾಯಚೂರಿನ ಹುಡುಗನಿಗೆ ಉಪ ನಾಯಕನ ಪಟ್ಟ ಒಲಿದು ಬಂದಿದೆ. ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿ ಆಟಗಾರ ಪಟ್ಟಿ ರಿಲೀಸ್ ಮಾಡಿದ್ದು, ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ನಾಯಕನಾಗಿದ್ರೆ ರಾಯಚೂರಿನ ಅನಿಕೇತ್ ರೆಡ್ಡಿ ಉಪ ನಾಯಕನಾಗಿದ್ದಾನೆ.
ಅನಿಕೇತ್ ರೆಡ್ಡಿ ರಾಯಚೂರಿನ ವಿಕ್ರಂ ರೆಡ್ಡಿ ಮತ್ತು ದೀಪ್ತಿ ರೆಡ್ಡಿ ದಂಪತಿಯ ಪುತ್ರ. ವಿಕ್ರಂ ರೆಡ್ಡಿ ಅವರು ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ರೈಬರ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪುತ್ರನ ಕ್ರಿಕೆಟ್ ಸಾಧನೆಗೆ ಎಲ್ಲೆಡೆ ಬಾರಿ ಪ್ರಶಂಸೆ ವ್ಯಕ್ತವಾಗಿದೆ.
ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅನಿಕೇತ್ ಅಭ್ಯಾಸ ಮಾಡುತ್ತಿದ್ದು. ಇದೇ ಡಿಸೆಂಬರ್ 1ರಿಂದ 23ರವರೆಗೆ ವಿಜಯವಾ ಡದಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ.
7 ವರ್ಷದಲ್ಲೇ ಕ್ರಿಕೆಟ್ ಬಗ್ಗೆ ಮಗನಿಗೆ ತುಂಬಾ ಆಸಕ್ತಿ ಇತ್ತು. ಸ್ಟೇಟ್ ಟೀಮ್ ನಲ್ಲಿ ವೈಸ್ ಕ್ಯಾಪ್ಟನ್ ಸಿಕ್ಕಿರೋದು ಬಹಳ ಸಂತೋಷ ತಂದಿದೆ. ನಮಗೆ ಇರೋದು ಒಬ್ಬನೇ ಮಗ. ಅವನ ಪ್ರಪಂಚವೇ ಕ್ರಿಕೆಟ್. ಆದ್ರೆ ನಮಗೆ ಅವನೇ ಪ್ರಪಂಚ ಎಂದು ವಿಕ್ರಂ ರೆಡ್ಡಿ ಹೇಳುತ್ತಾರೆ.
ನಮ್ಮದು ಮಿಡ್ ಕ್ಲಾಸ್ ಪ್ಯಾಮಿಲಿ. ಸ್ವಲ್ಪ ಬ್ಯಾಲೆನ್ಸ್ ತಪ್ಪಿದ್ರು ಕಷ್ಟ. ಅವನಿಗಾಗಿ ನಾನು ಎರಡು ವರ್ಷ ಯಾವುದೇ ಪ್ರೊಮೋಷನ್ ತೆಗೆದುಕೊಂಡಿಲ್ಲ. ನಾನೇ ಎರಡು ವರ್ಷ ಪ್ರೊಮೋಷನ್ ಬೇಡ ಅಂತ ಬರೆದು ಕೊಟ್ಟಿದ್ದೇನೆ. ನನಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರ ಸಿಕ್ಕಿದೆ. ಅವರೆಲ್ಲರ ಆಶೀರ್ವಾದದ ಬಲದಿಂದ ಇಂದು ನನ್ನ ಮಗ ಈ ಹಂತಕ್ಕೆ ಬಂದಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದರು.
ವಿಕ್ರಂ ರೆಡ್ಡಿ, ಅನಿಕೇತ್ ರೆಡ್ಡಿ ತಂದೆ
ಮಗನನ್ನು ಎಲ್ಲಿಯಾದರೂ ಹೋದರೂ ನಾನೇ ಕರೆದುಕೊಂಡು ಹೋಗಬೇಕಿತ್ತು. ಮಗನ ಈ ಸಾಧನೆಗೆ ತುಂಬಾ ಖುಷಿಯಾಗ್ತಿದೆ ಎಂದು ವಿಕ್ರಂ ರೆಡ್ಡಿ ಹೇಳಿದರು.
ಪರಿಶ್ರಮದಿಂದ ಇಲ್ಲಿವರೆಗೆ ಬಂದಿದ್ದಾನೆ
ಇನ್ನು ಅನಿಕೇತ್ ತಾಯಿ ದೀಪ್ತಿ ರೆಡ್ಡಿ ಮಾತನಾಡಿ, ಅತಿ ಹೆಚ್ಚು ರನ್ ಗಳಿಸಿ ಮಗ ಸ್ಟೇಟ್ ಟೀಂಗೆ ಸೆಲೆಕ್ಟ್ ಆಗಿದ್ದಾನೆ. ಅವನ ಪರಿಶ್ರಮದಿಂದಲೇ ಇಲ್ಲಿಯವರೆಗೆ ಬಂದಿದ್ದಾನೆ. ಮಗನ ಆಯ್ಕೆಯಿಂದ ಕುಟುಂಬಸ್ಥೆರೆಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಮಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.