ಅಮೋಘ ಮನರಂಜನೆ ಡೆಸ್ಕ್: ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ (ಸೈಮಾ) ಈ ಬಾರಿ ದುಬೈನಲ್ಲಿ ಆಯೋಜನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಕಾರ್ಯಕ್ರಮದಲ್ಲಿ 2022ರಲ್ಲಿ ಬಿಡುಗಡೆಗೊಂಡ ದಕ್ಷಿಣ ಭಾರತದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್ ಚಾಪ್ಟರ್ 2ಗೂ ಅವಾರ್ಡ್ ಸಿಗಲಿವೆ ಎನ್ನುವ ಮಾತುಗಳ ಫಿಲ್ಮಿ ದುನಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
ಈ ಬಾರಿ ಯಾವ ಯಾವ ಚಿತ್ರಗಳು, ಎಷ್ಟು ಕ್ಯಾಟಗೆರಿಯಲ್ಲಿ ನಾಮಿನೇಟ್ ಆಗಿವೆ ಎಂಬ ಬಗ್ಗೆ ಸೈಮಾ ಅಧಿಕೃತವಾಗಿ ತಿಳಿಸಿದ್ದು, ಇದರಲ್ಲಿ ತೆಲುಗು ಭಾಷೆಯ ಆರ್.ಆರ್.ಆರ್, ತಮಿಳಿನ ಪೊನ್ನಿಯಿನ್ ಸೆಲ್ವನ್, ವಿಕ್ರಂ, ಮಲಯಾಳಂನ ತಲ್ಲುಮಾಲ ಸೇರಿದಂತೆ ಹಲವಾರು ಚಿತ್ರಗಳು ಈ ಬಾರಿಯ ಸೈಮಾ ಪ್ರಶಸ್ತಿಗೆ ಸೆಲೆಕ್ಟ್ ಆಗಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಚಾರ್ಲಿ 777, ವಿಕ್ರಾಂತ್ ರೋಣ, ಲವ್ ಮಾಕ್ಟೇಲ್ 2, ಕೆಜಿಎಫ್ ಚಾಪ್ಟರ್ 2, ಕಾಂತಾರ ಚಿತ್ರಗಳು ನಾಮಿನೇಟ್ ಆದರೆ, ತೆಲುಗಿನ ಡಿಜೆ ಟಿಲ್ಲು, ಕಾರ್ತಿಕೇಯ 2, ಮೇಜರ್, ಆರ್ ಆರ್ ಆರ್, ಸೀತಾ ರಾಮಮ್, ತಮಿಳಿನ ಲವ್ ಟುಡೇ, ಪೊನ್ನಿಯನ್ ಸೆಲ್ವನ್ 1, ರಾಕೆಟ್ರಿ; ದ ನಂಬಿ ಎಫೆಕ್ಟ್, ತಿರುಚಿತ್ರಾಂಬಲA, ವಿಕ್ರಮ್ ಸೇರಿದಂತೆ ಹಲವು ಚಿತ್ರಗಳು ಈ ಬಾರಿಯ ಸೈಮಾ ಅವಾರ್ಡ್ಗೆ ನಾಮಿನೇಟ್ ಆಗಿವೆ.

tayappa_editor